Monday, May 28, 2012
ಒಂದು ಅನನುಕೂಲ ಸತ್ಯ
ಮಹಾರಾಷ್ಟ್ರದ ಚಂದ್ರಾಪುರದ ಕಾಡುಗಳಲ್ಲಿ ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಎರಡು ಹುಲಿಗಳು ದವಡೆಕತ್ತರಿಯಲ್ಲಿ(ಜಾಟ್ರಾಪ್) ಸಿಕ್ಕಿದ ಪ್ರಕರಣ ಅರಣ್ಯ ಇಲಾಖೆಯ ಗಸ್ತು ತಿರುಗುತ್ತಿದ್ದ ಸಿಬ್ಬಂದಿಗಳಿಂದ ತಿಳಿಯಿತು. ಇದರಲ್ಲಿ ಹುಲಿಯೊಂದು ಸ್ಥಳದಲ್ಲೇ ಮರಣ ಹೊಂದಿತ್ತು. ಇನ್ನೊಂದು ನಾಗಪುರದ ವನ್ಯಜೀವಿ ಪುನಶ್ಚೇತನಾ ಕೇಂದ್ರದಲ್ಲಿ ಎರಡೂ ಮೂತ್ರಪಿಂಡಗಳು ಹಾನಿಗೊಳಗಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದೆ. ನಾಗರಹೊಳೆಯ ಉತ್ತರದಲ್ಲಿರುವ ದೊಡ್ಡಹರವೆ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಹೋದ ತಿಂಗಳು ಸ್ಥಳೀಯ ವ್ಯಕ್ತಿಯೂಬ್ಬನು ಹುಲಿ ಬೇಟೆಯಾಡಿ ಪೋಲಿಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಇದೇ ತಿಂಗಳು ಹಿಮಾಚಲ ಪ್ರದೇಶದಲ್ಲಿ ೨೨ ವರ್ಷದ ಬಾಕ್ಸಿಂಗ್ ಕ್ರೀಡಾ ತರಬೇತುದಾರನೊಬ್ಬನಿಂದ ಮೂರು ಚಿರತೆ ಚರ್ಮಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಇದೇ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಹುಲಿ ಚರ್ಮ, ಮತ್ತೊಂದು ಚಿರತೆ ಚರ್ಮವನ್ನು ವಶಪಡಿಸಿಕೊಂಡರು. ಎರಡು ದಿನಗಳ ಹಿಂದೆಯಷ್ಟೇ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬ್ಯಾಂಕಾಕ್‌ಗೆ ತೆರಳುತ್ತಿದ್ದ ಪ್ರಯಾಣಿಕನೊಬ್ಬನಿಂದ ೪೮೩ ನಕ್ಷತ್ರ ಆಮೆಗಳನ್ನು ವಶಪಡಿಸಿಕೊಂಡರು. ವನ್ಯಜೀವಿಗಳ ಬೇಟೆ ಮತ್ತು ವ್ಯಾಪಾರದ ಪ್ರಕರಣಗಳ ಪಟ್ಟಿ ಉದ್ದವಾಗುತ್ತಲೇ ಇದೆ.
ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಸುಮಾರು ೨೭೦ಕ್ಕೂ ಹೆಚ್ಚು ವನ್ಯಜೀವಿ ಬೇಟೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಅಂದರೆ, ಸುಮಾರು ನಾಲ್ಕು ದಿನಗಳಿಗೊಮ್ಮೆ ಕರ್ನಾಟಕದಲ್ಲಿ ವನ್ಯಜೀವಿ ಬೇಟೆ ದಾಖಲಾಗುತ್ತಿದೆ. ದಾಖಲಾಗುವುದು ಇಷ್ಟಾದರೆ ಪತ್ತೆಯಾಗದವು ಇನ್ನೆಷ್ಟೋ? ಮಾಧ್ಯಮಗಳಲ್ಲಿ ಕೂಡ ವನ್ಯಜೀವಿ ಬೇಟೆಯ ಸುದ್ದಿಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಈ ಎರಡೂ ಸಂಕೇತಗಳು ವನ್ಯಜೀವಿಗಳ ಬೇಟೆ ಹೆಚ್ಚಾಗುತ್ತಿರುವುದನ್ನು ತೋರಿಸುತ್ತಿರಬಹುದು.
ಆದರೆ, ಅನಾದಿ ಕಾಲದಿಂದಲೂ ನಮ್ಮ ನಾಡಿನಲ್ಲಿ ಜನ ಅನೇಕ ಕಾರಣಗಳಿಗೆ ಬೇಟೆಯಾಡುವುದು ಪದ್ಧತಿ. ಆಹಾರಕ್ಕೆ, ಮೋಜಿಗೆ, ಧರ್ಮದ ಹೆಸರಿನಲ್ಲಿ, ವ್ಯಾವಹಾರಿಕ ದೃಷ್ಟಿಯಿಂದ, ಹೀಗೆ ಕಾರಣಗಳು ಹಲವಾರು. ಹಿಂದೆ ಜನ, ಜಾನುವಾರು ಮತ್ತು ಬೆಳೆ ಸಂರಕ್ಷಣೆಗಾಗಿ ಕೂಡ ಈಡುಗಾರರು ಬೇಟೆಯಾಡುತ್ತಿದ್ದರು. ಅದೊಂದು ಸಾಮಾಜಿಕ ಜವಾಬ್ದಾರಿಯೆಂದೇ ತಿಳಿದಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೊಕಿನ ಬಡ್ಡಡ್ಕ ಅಪ್ಪಯ್ಯ ಗೌಡರು ಈ ವಿಚಾರದಲ್ಲಿ ಪ್ರತಿಷ್ಠಿತರು. ಹಾಗೆಯೇ ಬೆಂಗಳೂರಿನ ಕೆನೆತ್ ಆಂಡರ್‌ಸನ್, ಕೊಡಗಿನ ನರಿಬೊಡಿ ಚಂಗಪ್ಪ ಹೀಗೆ ಹಲವರು ರಾಜ್ಯದ ಪ್ರಖ್ಯಾತ ಈಡುಗಾರರು. ಹಾಗಾದರೆ ಈಗ ಬೇಟೆ ಹೆಚ್ಚುತ್ತಿದೆ ಎನ್ನುವುದರಲ್ಲಿ ವಿಶೇಷವೇನು? ಕೆಲ ಜನ ಆಹಾರಕ್ಕಾಗಿ ಬೇಟೆಯಾಡುತ್ತಾರಲ್ಲವೆ?
ವ್ಯತ್ಯಾಸವೆಂದರೆ ಈಗ ನಮ್ಮ ಜನಸಾಂದ್ರತೆ ಅತೀ ಹೆಚ್ಚಾಗಿದೆ ಹಾಗೂ ಇದ್ದ ಅರಣ್ಯ ಪ್ರದೇಶ ಕುಗ್ಗುತ್ತಿದೆ. ಮಧ್ಯ ಆಫ್ರಿಕಾ ದೇಶಗಳು ಅಥವಾ ದಕ್ಷಿಣ ಅಮೇರಿಕಾದ ಕೆಲ ದೇಶಗಳಲ್ಲಿದ್ದ ಅತೀ ಕಡಿಮೆ ಜನಸಾಂದ್ರತೆಯಿರುವ ಕಾಡುವಾಸಿಗಳ ಹಾಗಿಲ್ಲ ನಮ್ಮ ಕಾಡು ಮತ್ತು ಅವುಗಳ ಸುತ್ತಮುತ್ತಲಿರುವ ಪ್ರದೇಶಗಳು. ಅಲ್ಲಿ ಪ್ರತೀ ಚದರ ಕಿಲೋಮಿಟರ್‌ನಲ್ಲಿ ಒಬ್ಬರಿಗಿಂತ ಕಡಿಮೆ ಜನವಾಸ್ತವ್ಯವಿದ್ದರೆ ನಮ್ಮ ದೇಶದಲ್ಲಿ ಕಾಡಿನ ಸುತ್ತಮುತ್ತಲೂ ಚದರ ಕಿಲೋಮಿಟರ್‌ನಲ್ಲಿ ೩೦೦ಕ್ಕೂ ಹೆಚ್ಚು ಜನರಿದ್ದಾರೆ. ಕಾಡಿನೊಳಗಾದರೂ ಜನ ಸಂಖ್ಯೆ ಕಡಿಮೆಯಿದೆಯೆ? ಅಲ್ಲೂ ಕೂಡ ವನ್ಯಜೀವಿಗಳು ಬೇಟೆಯನ್ನು ತಡೆದುಕೊಳ್ಳಲಾರದಷ್ಟು ಹೆಚ್ಚು ಜನಸಾಂದ್ರತೆಯಿದೆ. ಬೇಟೆಯ ಬಗ್ಗೆ ಅಧ್ಯಯಿಸಿರುವ ವನ್ಯಜೀವಿ ವಿಜ್ಞಾನಿಗಳ ಪ್ರಕಾರ, ಚದರ ಕಿಲೋಮಿಟರ್ ಪ್ರದೇಶದಲ್ಲಿ ಒಬ್ಬರಿಗಿಂತ ಹೆಚ್ಚು ಜನಸಾಂದ್ರತೆಯಿದ್ದಲ್ಲಿ ಅಲ್ಲಿ ಬೇಟೆ, ತಾಳಿಕೆಯ ಮಟ್ಟವನ್ನು ಮೀರಿ ಅಸರ್ಮರ್ಥಿತವಾಗುತ್ತದೆ. ಈ ಪ್ರದೇಶಗಳಲ್ಲಿ ವನ್ಯಜೀವಿಗಳು ನಶಿಸುವುದು ಖಡಾಖಂಡಿತ. ನಮ್ಮಲ್ಲೀಗ ಆಹಾರಕ್ಕಾಗಿ ಬೇಟೆಯಾಡುವ ಪರಿಸ್ಥಿತಿ ಬಹುಶ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿನ ಕೆಲ ಅರಣ್ಯವಾಸಿ ಸಮುದಾಯಗಳಿಗೆ ಬಿಟ್ಟರೆ ಇನ್ನ್ಯಾರಿಗೂ ಅದರ ಅವಶ್ಯಕತೆಯಿಲ್ಲ.
ಈಗಿನ ಬೇಟೆ ಎರಡು ಮುಖ್ಯ ಕಾರಣಗಳಿಗಾಗಿ ಆಗುತ್ತಿದೆ. ಕೆಲವರು ಮಾಂಸದ ರುಚಿಗಾಗಿ ಬೇಟೆಯಾಡುತ್ತಿದ್ದರೆ, ಇನ್ನಿತರರು ವನ್ಯಜೀವಿಗಳ ದೇಹದ ಭಾಗಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿರುವ ಬೇಡಿಕೆಯ ಪೂರೈಕೆಗೆ ವನ್ಯಜೀವಿಗಳನ್ನು ಕೊಲ್ಲುತ್ತಾರೆ. ದೇಶದ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುತ್ತಿದ್ದಂತೆ ಬೇಟೆಯಂತಹ ಸಮಾಜ ವಿರೋದಿ ಚಟುವಟಿಕೆಗಳು ಕಡಿಮೆಯಾಗಬೇಕಲ್ಲವೇ? ಆದರೆ ದುರಾದೃಷ್ಟವಶಾತ್ ಇದು ತಿರುಗುಮುರುಗಾಗಿದೆ. ವನ್ಯಜೀವಿಗಳ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದೆ. ಹಾಗೆಯೇ ದಕ್ಷಿಣ ಈಶಾನ್ಯ ದೇಶಗಳ ಆರ್ಥಿಕ ಮುನ್ನೆಡೆಯಿಂದಾಗಿ ನಮ್ಮದೇಶದ ವನ್ಯಜೀವಿಗಳ ಮೇಲೆ ಅತೀವ ಒತ್ತಡ ಬೀಳುತ್ತಿದೆ. ಫ್ರೀಟ್ರೇಡ್ನಿಂದಾಗಿ ದೇಶದಿಂದ ದೇಶಗಳಿಗೆ ಅಧಿಕೃತವಾಗಿ ಹಾಗೂ ಅನಧಿಕೃತವಾಗಿ ಸಾಮಾನು ಸರಂಜಾಮುಗಳನ್ನು ಸಾಗಿಸುವುದು ಅಷ್ಟೇನೂ ದೊಡ್ಡ ವಿಷಯವಾಗುಳಿದಿಲ್ಲ. ಈಗ ದಿನನಿತ್ಯದ ವಸ್ತುಗಳೊಡನೆ ವನ್ಯಜೀವಿಗಳ ವ್ಯಾಪಾರ ಸರಾಗವಾಗಿ ನಡೆಯುತ್ತಿದೆ.
ಕಳ್ಳದಂಧೆಗಾಗಿ ಹಿಂದೆ ಹೆಚ್ಚಾಗಿ ಬೇಟೆಯಾಗುತ್ತಿದ್ದದ್ದು ಹುಲಿ, ಚಿರತೆ, ನೀರುನಾಯಿಗಳ ಚರ್ಮ ಮತ್ತು ಅವುಗಳ ಮೂಳೆ, ಹಲ್ಲು, ಮೀಸೆ, ಉಗುರುಗಳಿಗಾಗಿ. ಆದರೆ ಇತ್ತೀಚಿನ ಬೆಳವಣಿಗೆಯಲ್ಲಿ ವಿನಾಶದ ಅಂಚಿನಲ್ಲಿರುವ ವನ್ಯಜೀವಿ ಪ್ರಭೇದಗಳೊಂದಿಗೆ ಕೆಲವು ಸಾಮಾನ್ಯವಾಗಿ ಕಂಡು ಬರುವ ಪ್ರಭೇದಗಳನ್ನು ಸಹಾ ವಾಣಿಜ್ಯೋದ್ದೇಶಕ್ಕಾಗಿ ಬೇಟೆಯಾಡುತ್ತಿರುವುದು ಅಘಾತಕಾರಿ. ಗೂಬೆ, ಎರಡು ತಲೆ ಹಾವು, ಮೃದುಚಿಪ್ಪಿನ ಆಮೆ, ಚಿಪ್ಪುಹಂದಿ, ಇನ್ನಿತರ ವನ್ಯಜೀವಿಗಳ ವ್ಯಾಪಕ ಮಾರಾಟ ದಂಧೆ ಪ್ರಾರಂಭವಾಗಿದೆ.
ವನ್ಯಜೀವಿಗಳ ದೇಹದ ಭಾಗಗಳಿಗೆ ಹೆಚ್ಚಾಗಿರುವ ಬೇಡಿಕೆ ಒಂದು ಕಾರಣವಾದರೆ, ಎರಡನೆಯದು ನಮ್ಮ ಅರಣ್ಯ ಸಂರಕ್ಷಣೆ, ಅತೀ ಕ್ಲಿಷ್ಟವಾದ ಮಾನವ-ವನ್ಯಜೀವಿ ಸಂಘರ್ಷಣೆಯನ್ನು ಕಡಿಮೆ ಮಾಡುವುದು, ಇಂತಹ ಜವಾಬ್ದಾರಿಯನ್ನು ಹೊತ್ತಿರುವ ಅರಣ್ಯ ಇಲಾಖೆಗೀಗ ರಕ್ಷಣೆಯೊಡನೆ ಇತರ ಹಲವಾರು ಕಾರ್ಯಕ್ರಮಗಳ ಜವಾಬ್ದಾರಿಯನ್ನು ಭುಜದ ಮೇಲೆ ಹೇರಲಾಗಿದೆ. ಮಹಾತ್ಮಾ ಗಾಂಧೀ ಗ್ರ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಹಲವು ಗ್ರಾಮೀಣ ಅಭಿವೃದ್ಧಿ ಯೋಜನೆಗಳು, ಪ್ರವಾಸೋದ್ಯಮ, ಕಾಡಿನಲ್ಲಿ ರಸ್ತೆ ನಿರ್ಮಿಸುವುದು, ಸೇತುವೆ ಕಟ್ಟುವುದು ಹೀಗೆ ಹಲವಾರು ಹೊಣೆಗಾರಿಕೆಗಳು. ಹೀಗಿದ್ದಾಗ ವನ್ಯಜೀವಿಗಳನ್ನು ಕಾಯುವ ಕೆಲಸಕ್ಕೆ ಸಮಯವೆಲ್ಲಿ?
ಈ ಎಲ್ಲಾ ಸಮಸ್ಯೆಗಳೊಡನೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದಲ್ಲಿ ಶೇಕಡ ಐವತ್ತಕ್ಕಿಂತ ಹೆಚ್ಚು ಸಿಬ್ಬಂದಿಗಳ ಕೊರತೆ. ಇರುವ ಸಿಬ್ಬಂದಿಗಳಿಗೆ ಸರಿಯಾದ ಸೌಲಭ್ಯ, ಸೌಕರ್ಯಗಳೇ ಇಲ್ಲ. ಕಾಡಿನ ದುರ್ಗಮ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುವ ಈ ಅರಣ್ಯ ರಕ್ಷಕರು ಮತ್ತು ವೀಕ್ಷಕರ ಗತಿ ಯಾರಿಗೂ ತಿಳಿಯದ ವಿಷಯ. ಅದರಲ್ಲೂ ತಾತ್ಕಾಲಿಕ ನೌಕರರ ಪಾಡು ಬಲು ಕ್ಲಿಷ್ಟ. ಸಂಬಳ, ಮೇಲಧಿಕಾರಿಯ ಕೃಪೆಯ ಮೇಲಿರುತ್ತದೆ. ಹುಲಿ ಯೋಜನೆ ಪ್ರದೇಶದಲ್ಲಿ ಕೆಲಸ ಮಾಡುವವರಿಗೆ ಯೋಜನಾ ಭತ್ಯೆಯನ್ನು ಕೇಂದ್ರ ಸರ್ಕಾರ ಕೂಟ್ಟರೂ, ಹಲವು ಬಾರಿ ಕೆಳ ಮಟ್ಟದ ನೌಕರರಿಗೆ ತಲುಪುವುದೇ ಇಲ್ಲ. ರಾಜ್ಯದ ಪ್ರತಿಷ್ಠಿತ ರಾಷ್ಟ್ರೀಯ ಉದ್ಯಾನವೊಂದರಲ್ಲಿ ಈ ವರ್ಷ ಅಧಿಕಾರಿಯೊಬ್ಬರು ತಮ್ಮ ಭತ್ಯೆಯನ್ನು ಮಾತ್ರ ಕರ್ತವ್ಯ ಲೋಪವಾಗದಂತೆ ಶಿಸ್ತಿನಿಂದ ತೆಗೆದುಕೊಂಡು, ನೌಕರರ ಹುಲಿ ಯೋಜನಾ ಭತ್ಯೆಯನ್ನು ಹಂಚಲೇ ಇಲ್ಲ. ಹಣವೆಲ್ಲ ಸರ್ಕಾರಕ್ಕೆ ಹಿಂದಿರುಗಿದೆ. ಹೀಗಿರುವಾಗ ಕಾಡು ಕಾಯುವ ಸಿಬ್ಬಂದಿಗೆ ಬೇಟೆ ನಿಗ್ರಹಿಸಿರೆಂದು ಹೇಳಲು ಕಷ್ಟವಾಗುತ್ತದೆ.
ವನ್ಯಜೀವಿ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುವವರು ಕಾಡಿನಲ್ಲಿ ಗಸ್ತು ತಿರುಗುವ ಬೇಟೆನಿಗ್ರಹ ದಳಗಳು. ಪ್ರತೀ ದಿನವೂ ಕಾಡಿನ ಆಯಕಟ್ಟು ಪ್ರದೇಶಗಳಲ್ಲಿ ಗಸ್ತು ತಿರುಗುವುದು, ಬೇಟೆಯಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ಪತ್ತೆ ಹಚ್ಚುವುದು, ವನ್ಯಜೀವಿ ಸಂರಕ್ಷಣೆಗೆ ಅತ್ಯುತ್ತಮ ಫಲಿತಾಂಶಗಳನ್ನು ತಂದು ಕೂಟ್ಟ ಕಾರ್ಯ ವಿಧಾನ. ಹಿಂದೆ ಹಲವು ಅಭಯಾರಣ್ಯ, ರಾಷ್ಟ್ರೀಯ ಉದ್ಯಾನಗಳಲ್ಲಿ ಅರಣ್ಯ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮಾಡಿದ ಉತ್ತಮ ಕಾರ್ಯಗಳಿಂದ ವನ್ಯಜೀವಿಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿತ್ತು. ಆದರೆ ಇಂದು ಈ ಬೇಟೆ ನಿಗ್ರಹದ ವಿಧಾನದಲ್ಲಿ ನಂಬಿಕೆಯಿರುವ ಅಧಿಕಾರಿಗಳೇ ಕಡಿಮೆ. ಕಾಡಿನಲ್ಲಿ ನಡೆದಾಡುವ, ವನ್ಯಜೀವಿಗಳನ್ನು ನೋಡಿ ಸಂತೋಷ ಪಡುವ, ನಿಸರ್ಗದ ಬಗ್ಗೆ ಉತ್ಕಟ ಭಾವನೆಯಿರುವ ಅಧಿಕಾರಿಗಳು ಕೂಡ ನಶಿಸುವ ಹಂತದಲ್ಲಿದ್ದಾರೆ. ಕಾಡಿನಲ್ಲಿ ಗಸ್ತು ತಿರುಗದಿದ್ದರೆ ಉರುಳು, ದವಡೆ ಕತ್ತರಿಗಳನ್ನು ಪತ್ತೆ ಹಚ್ಚುವುದು ಅಸಾಧ್ಯ.
ಕಾಡಿಗೇ ಹೋಗದ ಪರಿಸ್ಥಿತಿ ಅಧಿಕಾರಿಗಳಲ್ಲಷ್ಟೇ ಅಲ್ಲ ಸರ್ಕಾರೇತರ ಸಂಸ್ಥೆಗಳು, ವನ್ಯಜೀವಿ ವಿಜ್ಞಾನಿಗಳಲ್ಲೂ ಕೂಡ ಪ್ರಚಲಿತ. ಹಲವಾರು ತಜ್ಞರುಗಳು ಸಭೆ, ಗೋಷ್ಠಿ, ಮೇಳಗಳಲ್ಲೇ ಸಮಯ ವ್ಯಯಿಸುತ್ತಾರೆ. ಆದರೆ ಸರ್ಕಾರಕ್ಕೆ ಪ್ರತಿದಿನವೂ ವನ್ಯಜೀವಿ ಸಂರಕ್ಷಣೆ ಹೇಗೆ ಮಾಡಬೇಕೆನ್ನುವ ಪಾಠ ಹೇಳುವುದಂತೂ ಮರೆಯುವುದಿಲ್ಲ.
೧೯ ಮತ್ತು ೨೦ನೇ ಶತಮಾನದಲ್ಲಿಐರೋಪ್ಯ ರಾಷ್ಟ್ರಗಳಲ್ಲಾದ ಅತಿಯಾದ ಬೇಟೆಯಿಂದ ಅಲ್ಲಿದ್ದ ಹಲವಾರು ವನ್ಯಜೀವಿಗಳು ನಶಿಸಿ ಹೋದವು. ಸ್ಕಾಟ್‌ಲ್ಯಾಂಡ್‌ನಿಂದ ತೋಳಗಳು, ಸ್ವಿಟ್ಜ್‌ರ್‌ಲ್ಯಾಂಡ್‌ನಿಂದ ಕರಡಿ ಮತ್ತು ಲಿಂಕ್ಸ್, ಪೋಲೆಂಡ್‌ನಿಂದ ಕಾಡೆಮ್ಮೆ, ನೆದರ್‌ಲ್ಯಾಂಡ್ಸ್‌ನಿಂದ ಹಂದಿ ಮೀನು (ಡಾಲ್ಫಿನ್), ಸ್ಪೇನ್‌ನಿಂದ ಬೊಕ್ಕ ತಲೆಯ ಕೆಂಬರಲು (ಐಬಿಸ್) ಹಕ್ಕಿ, ಹೀಗೆ ಹತ್ತಾರು ಉದಾಹರಣೆಗಳಿವೆ. ಆ ವನ್ಯಜೀವಿಗಳನ್ನು ಹಿಂದಕ್ಕೆ ತರಲು ಇಂದು ಅದೇ ದೇಶಗಳು ಮಿಲಿಯಾಂತರ ಡಾಲರ್ ಹಣ ವ್ಯಯ ಮಾಡಲು ತಯಾರಾಗಿವೆ. ಆ ದೇಶಗಳು ಮಾಡಿರುವ ತಪ್ಪುಗಳಿಂದ ಪಾಠ ಕಲಿಯುವುದು ಜಾಣತನ, ಆದರೆ ಅದೇ ತಪ್ಪನ್ನು ನಾವೂ ಮಾಡುವುದು ಮೂರ್ಖತನವಾಗುತ್ತದೆ.
ಹಿಂದೆ ೮೦ರ ದಶಕಗಳಲ್ಲಿ ಅರಣ್ಯ ಇಲಾಖೆಯ ಉತ್ತಮ ಕಾರ್ಯಗಳಿಂದ ವನ್ಯಜೀವಿಗಳು ೮೦ ಮತ್ತು ೯೦ರ ದಶಕಗಳಲ್ಲಿ ಸುಧಾರಿಸಿಕೊಂಡಿದ್ದವು. ಆದರೆ ಈಗ ವನ್ಯಜೀವಿ ಸಂರಕ್ಷಣಾ ಕಾರ್ಯವೇ ದಿಕ್ಕು ಬದಲಿಸುತ್ತಿದೆ. ತನ್ನ ಮುಖ್ಯ, ನೇರ ಗುರಿಯಿಂದ ಹಲವಾರು ದಿಕ್ಕುಗಳಿಗೆ ತಿರುಗಿದೆ. ಅದನ್ನು ತಕ್ಷಣವೇ ಸರಿಪಡಿಸದಿದ್ದರೆ ನಮ್ಮ ದೇಶದ ಬಹುಮೂಲ್ಯ ವನ್ಯಜೀವಿಗಳು ನಾಶವಾಗುವ ಪರಿಸ್ಥಿತಿ ಬರಬಹುದು. ಬೇಟೆಯನ್ನು ಕಡಿಮೆ ಮಾಡಲು ಅದು ಪ್ರತಿದಿನದ ಸಮಸ್ಯೆಯೆಂದು ಗುರುತಿಸುವುದು ಬಹು ಮುಖ್ಯ. ಬೇಟೆನಿಗ್ರಹ ಕಾಲ್ದಳಗಳು ಸರ್ಮರ್ಥವಾಗಿ ಕಾರ್ಯ ನಿರ್ವಹಿಸುವಂತಾಗಬೇಕು, ಅದನ್ನು ಗುರುತಿಸಿ ಕೆಳ ವರ್ಗದ ಸಿಬ್ಬಂದಿಗಳನ್ನು ಹುರಿದುಂಬಿಸಿ ಕೆಲಸ ಮಾಡುವ ಅಧಿಕಾರಿಗಳು ಬೇಕು. ಇಲ್ಲವಾದಲ್ಲಿ ಇರುವ ಹಲವಾರು ಒತ್ತಡಗಳ ಮಧ್ಯೆ ವನ್ಯಜೀವಿ ಸಂರಕ್ಷಣೆ ಹಲವಾರು ದಶಕಗಳ ಹಿಂದಿದ್ದ ಪರಿಸ್ಥಿತಿಗೆ ತಲುಪುವ ಸಾಧ್ಯತೆಯಿದೆ.
ಈ ಲೇಖನದ ಪರಿಷ್ಕೃತ ಆವೃತ್ತಿ ದಿನಾಂಕ ೨೪-೦೫-೨೦೧೨ರಂದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ
Monday, May 14, 2012
In the noose and under the gun
A tiger dies caught in a
snare set for catching wild ungulates - ©Vinod/Team
bhpForum
Images of confiscated tiger or leopard pelts seem to be a
common feature in Indian media these days. There is an escalation in seizure of
wildlife products depicting either increased vigil by enforcement authorities or
increase in poaching incidences or a combination of these two. Interestingly,
the species confiscated are more diverse than earlier. In the past, wildlife products
confiscated mostly consisted of parts from rare or economically prized wildlife
species such as tiger, leopard, otter and elephant. Now, even common species are
increasingly finding their place in the list of seized materials. Barn owl,
sand boa, soft shell turtle, axis deer and many other commonly found wildlife
species are incessantly targeted by poachers. Similarly, the quantity of tiger
and leopard pelts and elephant ivory seized has been on the rise. It looks like
the booming economies of China and South East Asian countries have increased
the demand for wildlife products.
Poaching of wildlife happens at two scales, for meat or for body
parts. Hunting for meat is largely carried out by individuals or by loosely
formed groups targeting high meat yielding species, or species that are high on
the list of taste buds.
Hunting for body parts is controlled by organized
syndicates. Shockingly, loosely knit local poachers are now trying to hunt high
value wildlife species to find their way into the organized syndicates. Many
accused recently arrested with tiger and leopard pelts confess to have
opportunistically poached big cats or collected elephant ivory in the hope of
finding ways to sell their valuable catch uncovering a disturbing trend.
Interestingly, several of the people recently arrested
trying to buy common wildlife species are from the real estate business. At a
period when real estate profits were low, it is believed these entrepreneurs relied
on black magic to enhance their profits.
People hunt wildlife for sport, religious reasons, to earn
supplementary income and some with large income motivations. Humans have been
hunting in the tropical forests for 100,000 years. So what is alarming about
wildlife poaching? The fact that the scale and consumption levels have gone
beyond sustainable levels, atleast in the Indian context. Science says that
wild meat hunting will be unsustainable when human densities exceed 1
person/square kilometer. Unlike in some parts of Africa, South America and small
parts of India, people do not depend on wild meat as a primary source of
protein. Wherever hunting is sustainable it is only due to the fact that human
densities are so low that offtakes do not make any dent on wildlife
populations.
Leopard pelts are being
increasingly seized by enforcement authorities - ©Sharathbabu
Effects of hunting
Hunting is a loser’s game. It affects wildlife at various intensities
including at individual , population and
landscape levels. Hunting leads to decreased wildlife densities. In some cases
even if the species is not locally extinct, it would not be performing its
ecological functions due to the miniscule numbers; hence can be considered as ‘ecologically
extinct’. Hunting of bird species such as hornbills, that provide key ecosystem
services through seed dispersal, could upset the forest complex as plant
species dependent on hornbills for dispersal can go locally extinct.
India lost tigers from Sariska and Panna tiger reserves during
the last decade and media increasingly reports stories of confiscated wildlife
products. So have we taken our eye off the ball? Increasingly, our focus and
determination to carry out old fashioned activities has given way to other conservation
enforcement strategies. The time tested foot patrolling is key to control
wildlife poaching. Success stories, at least in parts, have come through dedicated
long-term efforts of a few forest officials well supported by their ground team
who believed in this fundamental practice to combat poaching.
Wildlife numbers
bounced back under these situations. Currently, even with increased resources
and the best of legislations, few believe in this reliable system. A snare or a
jaw trap can be detected only through foot patrolling; there is no alternative
to this and unfortunately few care about this.
Behavioral changes in people will take a long time to become
a reality. Till people wholeheartedly stop killing wildlife we need our foot
soldiers to scan, monitor, and handle poaching as a primary conservation
threat. However, to make them more effective and keep them motivated, we need
to enhance the incentives provided to these trench warriors. A forest watcher continues
to languish in the hot and humid jungles with little amenities. To improve his
condition, he needs full support of those
key people in decision making positions.
Ungulates such as chital are largely killed for their meat -
©Sanjay
Gubbi
It will be foolhardy not to recognize this renewed
conservation threat and appropriately implement strategies to save our
endangered wildlife species. Needless to say our hard learnt lessons from
Sariska and Panna will mean very little in the larger conservation context.
Some key wildlife species hunted in southern India
Species largely hunted for meat consumption
|
Species hunted for trade of body parts or as live animals
|
Chital
Sambar
Gaur
Wild pig
Barking deer
Mouse deer
Jungle cat
Flying squirrel
Giant squirrel
Blacknaped hare
Porcupine
Pangolin
Hanuman langur
Fruit bats
Partridges and quail
Jungle fowl
Monitor lizard
|
Tiger*
Leopard*
Elephant*
Otter*
Jackal*
Mongoose*
Star tortoise&
Owls+
Sand boa+
Soft shell turtles+
|
*for body parts, & for pet trade, +recent
increase mostly for black magic purposes.
Why not farm wildlife to reduce pressure on wild
populations?
Though a very attractive theoretical concept, it often
hasn’t worked in practice. Field evaluations have clearly shown that people
prefer wild animals compared to farmed wildlife products. Crocodiles, turtles,
porcupines, bear and other species that have been widely farmed in China and
Vietnam continue to face extinction in these countries. Studies show that
breeders continue to source meat from the wild and founder stock due to lower
costs and higher consumer demand for wild caught meat compared to farm bred
animals.
An edited version of this article was published in Deccan Herald on 07-05-2012
Tuesday, May 8, 2012
Investing to deforest?
The location of a tourism and wellness resort permitted in a narrow corridor on the outskirts of Bandipur Tiger Reserve under the previous Global Investors Meet
In a few days’ time, the median on the highway from the
Bangalore International Airport leading to the city center will have a new lawn
and various stone statues. Any small pothole on the highway will be filled and
parts of the city will be spruced up. This will be part of the preparations for
the Global Investors Meet (GIM).
The Government has taken keen interest in drawing both local
and international investment into the state, a laudable effort indeed. In this
background it has been successfully organizing the GIM and the next one is now at
our doorstep. The most important activity that follows the investors meet is
the process for land acquisition for various investments agreed during the
meet. For this, the Government has setup a single window clearance system to
clear and provide permissions to setup industries, tourism and other projects.
Along with this fast track clearance process, several economic impetuses are
provided by the Government. All these
are positive steps that bring in more investment and employment opportunities facilitating
improvement of our economy.
However, a key element in the process of land allotment for
projects seems to be missing the Government’s attention. Some of the projects
allotted fall in ecologically sensitive and key wildlife habitats or corridors
leading to controversies and media attention. The core of the issue has been
that no opinion of forest department or people working in the field has been
elicited. As the projects are approved in GIM, investors compel Government
officials for speedy clearance of their projects. Several acts, guidelines and
norms are violated in the urgency to clear these projects and there are quite a
few examples of such clearances from the previous GIM.
The forests on the periphery of Bandipur Tiger Reserve under
Bachalli, Kebbepura, Yelchetti and other villages have decent forest cover and
act as connectivity corridors for tigers, elephants and other large mammals to
move to Mudumalai Tiger Reserve in Tamilnadu. During the previous GIM, the
Government approved a tourism and Ayurveda wellness resort in this vital corridor.
This resort, if constructed, would have permanently severed this fragile
corridor. Fortunately, due to the efforts of conservationists and forest
officials, this project has currently been put on the back burner.
There are other examples of industries creeping next to our
biologically diverse areas. The dry plains of the state have very few protected
areas, and Daroji Bear Sanctuary is one of the few areas in the country
earmarked for sloth bear conservation. The sanctuary is a unique effort on part of
the Government of Karnataka to protect sloth bears. However, a recent
short-sighted proposal to set up a steel plant right on the boundary of this
unique wildlife sanctuary has raised controversies. A scientific report by wildlife
conservationists and prompt response of the previous forest minister supported
by the Chief Minister ensured that the bear sanctuary was protected. If the
state had preferred steel to bears, it would have unquestionably attracted the
wrath of the Supreme Court and the Central Empowered Committee.
A sugar mill has been permitted on the borders of
Biligirirangaswamybetta Wildlife Sanctuary- an important habitat for tiger,
elephant and other large mammals apart from several other lesser known taxa.
The pollution impacts of the sugar mills on wildlife would have proved disastrous
but for the laudable efforts of a few local forest officials, the project hasn’t
materialized yet.
Investors look for best returns on their ventures. They may
mean well and are perhaps unaware of the ecological importance of their project
locations. The goal is not to oppose every developmental activity but to keep them
away from ecologically sensitive areas, critical wildlife corridors, national
parks and wildlife sanctuaries.
It has been announced that tourism would be a focal subject
of this year’s GIM. The districts of Mysore, Chamrajanagar, Coorg, Chikmagalur
and Uttara Kannada which have high forest cover would be attractive locations
for tourism investors. Most would dress their projects as eco-tourism
investments and would be enthusiastic to construct lodges in attractive
locations. Unfortunately, these resorts would have little interest in wildlife
or nature conservation, and obliterate the very habitats in whose name the
lodges would be setup.
In the west during 19th Century, industrial
revolution, forest destruction for timber industry and hunting led to
extinction of several of its important wildlife species. Wolves from Scotland,
bear and lynx from Switzerland, European bison from Poland, bottle-nosed
dolphin from Netherlands, Northern bald ibis from Spain are a few of the
several species Europe has lost. These countries are now interested in spending
heavily to bring back the species they have lost. It is wise to learn from the hard
lessons learnt by these countries.
How we manage our common lands, a severely limited resource,
will define the overall sustainability of our country. Less than five per cent
of our country’s geographical area is dedicated to wildlife conservation. If we
keep away our industries, tourism projects and other developmental activities
from these biologically diverse areas, there will be no dent in our goal of
achieving the nine per cent economic growth.
An edited version of this article was published in Deccan Herald on 08-05-2012
Subscribe to:
Posts (Atom)